Sunday, December 26, 2010

jalala jalala jala daare ಜಲಲ ಜಲಲ ಜಲ ಧಾರೆ

ಜಲಲ ಜಲಲ ಜಲ ಧಾರೆ
ಅದ್ಯಾಕೋ ಗೊತ್ತಿಲ್ಲ ನಾನು ನನಗೆ ಮಾತ್ರ ನೀರು ಮಳೆ ಅಂದ್ರೆ ಇಷ್ಟ ಅಂತ ಅನ್ದುಕೊ೦ಡಿದ್ದೆ ಆದರೆ ಮುಂಗಾರು ಮಳೆ ಫಿಲಂ ಬಂದ ಮೇಲೆ ತಿಳಿತು ತುಂಬಾ ಜನ ಮಳೆ ಅಂದರೆ ಇಷ್ಟ ಪಡುತ್ತಾರೆ ಅಂತ. ಈ ನೀರು ಒಲಿದರೆ ಜೀವ ಜಲ ಮುನಿದರೆ ಮೃತ್ಯು ಜಲ ನೀರು ಇಲ್ಲದೆ ಬದುಕಿಲ್ಲ ನೀರು ಮುನಿದರು ಬದುಕಿಸೋಲ್ಲ ಅದರೂ ನೀರು ಒಂತರ ನಮ್ಮನ್ನು ವ್ಯಾಮೋಹ ಗೊಳಿಸುತ್ತದೆ ರಭಸವಾಗಿ ಹರಿಯುವ ನೀರಿನ ಅ೦ದವೆ ಒಂದು ರೀತಿಯ ರುದ್ರ ರಮಣೀಯವಾದರೆ ಶಾಂತವಾಗಿ ಹರಿಯುವ ನೀರಿನ ಓಟ ಮನಸ್ಸನ್ನು ಮುದಗೊಳಿಸುತ್ತದೆ. ನೀರು ಯಾವಾಗ ಹೇಗೆ ಬದಲಾಗುತ್ತದೋ  ಗೊತ್ತಿಲ್ಲ ಅದರ ಆಳ ಹರಿವು ಅರಿಯುವುದು ಕಷ್ಟ ನೀರು ಬಲು ಚಂಚಲ, ಅದ್ದಕ್ಕೆ ಇರಬೇಕು ಹೆಣ್ಣನ್ನು ನೀರೆ ಎಂದು ಕರೆದರೆನ್ನಿಸುತ್ತೆ.  ಜೋರಾಗಿ ಧುಮುಕಿದರೆ ಜಲಪಾತ ಶಾಂತವಾಗಿ ಧುಮುಕಿದರೆ ಜಲಧಾರೆ ನನ್ನತಹ ಪ್ರಕೃತಿಪ್ರಿಯರಿಗೆ  ನೀರು ಹೇಗೆ  ಹರಿದರೂ ಧುಮುಕಿದರೂ ಅದನ್ನು ನೋಡುತ್ತಾಕುಲಿತು ಕೊಳ್ಳುವುದೇ ಒಂದು ಆನಂದ ಒಂದು ರೀತಿಯ ಧ್ಯಾನ ಎಲ್ಲರೂ ಕಣ್ಮುಚ್ಚಿ ಧ್ಯಾನ ಮಾಡಿದರೆ ನಾವು ಕಣ್ಣು ಬಿಟ್ಟು ನೋಡುತ್ತಾ ಮಾಡುವ ಜಲಧ್ಯಾನ. ನಾನು ನೋಡಿದ ಸೆರೆ ಹಿಡಿದ ಜಲದ ಚಿತ್ರಗಳು ಇಲ್ಲಿವೆ ನೋಡಿ ಇಷ್ಟ ಆದರೆ ನೀವು ಪ್ರಕೃತಿ ಧ್ಯಾನ, ಜಲ ಧ್ಯಾನ ಮಾಡಿ
ನಿಮ್ಮ
ಮನು




















  
                               




 




 















































Friday, October 1, 2010

ಕುರು೦ಜಿ ಹೂ KURUNJI HOO (strobilanthes kunthiana)

ಕುರು೦ಜಿ ಹೂ  
ಇತ್ತೀಚಿಗೆ ನಾನು ಪತ್ರಿಕೆಯೊಂದರಲ್ಲಿ ಚಿಕ್ಕಮಂಗಳೂರಿನ್ನಲ್ಲಿ   ಒಂದು ಗುಡ್ಡದಲ್ಲಿ ಕುರುಂಜಿ ಹೂ ಬಿಟ್ಟಿದೆ ಎಂದು ಓದಿದೆ ಕೇವಲ ನಾಲಕ್ಕು ವರ್ಷಗಳ ಹಿಂದೆ ಚಿಕ್ಕಮಂಗಳೂರಿನ ಬಾಬಬುಡನ್ ಗಿರಿಯಲ್ಲಿ ಹೂ ಬಿಟ್ಟಿದಿದ್ದು ಮತ್ತೆ ಇಷ್ಟು  ಬೇಗ ಹೇಗೆ ಬಿಟ್ಟಿತು ಎಂದು ಆಶ್ಚರ್ಯವಾಯಿತು. ನಂತರ ತಿಳಿಯಿತು ಅದು ಕೇವಲ ಒಂದು ಗುಡ್ಡದಲ್ಲಿ ಮಾತ್ರ ಎಂದು. ೨೦೦೬ರಲ್ಲಿ ಬಾಬಬುಡನ್ ಗಿರಿಯಲ್ಲಿ ಕುರುಂಜಿ ನೋಡಲು ಹೋಗಿದ್ದು ನೆನಪಾಯಿತು ಏಕೆಂದರೆ ಕುರುಂಜಿ ಹೂ ಬಿಡುವುದು ಹನ್ನೆರಡು ವರ್ಷ ಗಳಿಗೊಮ್ಮೆ ಮಾತ್ರ.
       ಬೆಂಗಳೂರಿನಿಂದ ೨೫೦ ಕಿಲೋಮಿಟರುಗಳಷ್ಟು ದೂರವಿರುವ ಕೆಮ್ಮನು ಗುಂಡಿ ಮತ್ತು ಬಾಬಬುಡನ್ ಗಿರಿ ನನ್ನ ಮೆಚ್ಚಿನ ತಾಣಗಳಲ್ಲಿ ಒಂದು, ಬೆಂಗಳೂರಿನಿಂದ ಅರಸೀಕೆರೆ ಮಾರ್ಗವಾಗಿ ಕಡೂರು ತಲುಪಿ ಅಲ್ಲಿಂದ ಎಡಕ್ಕೆ ತಿರುಗಿ ೫೦ ಕಿಲೋಮೀಟರ್ ಚಲಿಸಿದರೆ ಕೆಮ್ಮಣ್ಣು ಗುಂಡಿ, ಅಲ್ಲಿಂದ ಸುಮಾರು ೩೦ ಕಿಲೋಮೀಟರ್ ಬಾಬಬುಡನ್ ಗಿರಿ ಕೆಮ್ಮಣ್ಣು ಗುಂಡಿ ಇಂದ ಬಾಬಬುಡನ್ ಗಿರಿಗೆ ಪಯಣಿಸುವ ಹಾದಿಯೆ ಚೆನ್ನ ಒಂದು ಸುಂದರ ಅನುಭವ, ಕಣ್ಣುಗಳಿಗೆ ಅದ್ಬುತ ನೋಟ, ರಮಣಿಯವಾದ ದೃಶ್ಯ ಕಾವ್ಯ ಜಾರುವರಸ್ತೆ, ಎತ್ತರವಾದ ಮರಗಳು ಕೆಳಗೆ ಕಾಪಿ ಗಿಡಗಳು ಎಲ್ಲಿನೋಡಿದರು ಹಸಿರು ಹೊದ್ದು ಮಲಗಿರುವಂತೆ ಕಾಣುವ ಪ್ರಕೃತಿ ಅಲ್ಲಲ್ಲಿ ಹರಿಯುವ ಸಣ್ಣಸಣ್ಣ ಜರಿಗಳು ಮಧ್ಯ  ಮಧ್ಯದಲ್ಲಿ  ಕಾಣಸಿಗುವ ಜಲಪಾತಗಳು ಎಷ್ಟು ನೋಡಿದರು ಸಾಲದು ಎನ್ನಿಸುತ್ತದೆ.












ನಾವು ಬಾಬಬುಡನ್ ಗಿರಿ ತಲುಪಿದಾಗ ಎಲ್ಲೆಲ್ಲು ನೀಲಿ ಕುರುಂಜಿ ಹೂ ಬಿಟ್ಟಿತು ಬೆಟ್ಟಗಳೆಲ್ಲಾ ನಿಲೀ ಹೊದ್ದಂತೆ ಕಾಣುತಿತ್ತು. ಇಡಿ ವನ ಸಿರಿಯೆ ನಿಲೀಯ ಚಿತ್ತಾರ ಬಿಡಿಸಿದ ಸೀರೆ ಉಟ್ಟಂತೆ ಕಾಣುತಿತ್ತು ಎತ್ತ ಕಣ್ಣು ಹಯಿಸಿದರ್ರು ನೀಲಿಯೋ ನೀಲಿ! ದಕ್ಷಿಣ ಬಾರತದ ಇತರ ಕಡೆ ಗಳಲ್ಲಿ ಬಿಡುವ ಹೂ ಗೆ ಇಷ್ಟೊಂದು ಗಾಡವಾದ ಬಣ್ಣವಿರುವುದಿಲ್ಲ. ನಮ್ಮ ಕರ್ನಾಟಕದ  ಕೆಮ್ಮಣ್ಣಿನ ಗುಣದಿಂದ ಬಾಗಶಃ ಇಲ್ಲಿ ಹೂ ಗಳು ಇಷ್ಟೊಂದು ನೀಲಿಯಾಗಿರಬಹುದು. ಮನ್ನಾರ್ ಕೊಡಯ್ ಕೊನಾಲ್ ನಲ್ಲಿ  ಬಿಡುವ ಹೂಗಳು ಇದಕಿನ್ನ ಬಿನ್ನವಾದ ಬಣ್ಣವನ್ನು ಹೊಂದಿರುತ್ತವೆ ವಿಜ್ಞಾನದ ಪ್ರಕಾರ ಮುಂದೆ ಇವು ಹೂ ಬಿಡುವುದು ೨೦೧೮ ರಲ್ಲೇ ಮತ್ತೊಮ್ಮೆ ಹೂ ಬಿಟ್ಟಾಗ ನಿಮಗೆ ತಿಳಿಸುವೆ ಅಲ್ಲಿಯವರೆಗೂ ಈ ಚಿತ್ರ ಗಳನ್ನೂ ನೋಡಿ ಆನಂದಿಸಿ. ಕುರು೦ಜಿಯನ್ನು ಕುರಿಂಜಿ ಎಂದು ಕರೆಯುತ್ತಾರೆ ಇದರ ಸಸ್ಯ ಶಾಸ್ತ್ರದ ಹೆಸರು strobilanthes kunthiana ಇವು ಸಾಮಾನ್ಯವಾಗಿ ಕೆಂಪು ಮಣ್ಣು ಇರುವ ಶೋಲ ಅರಣ್ಯದಲ್ಲಿ ಬೆಳೆಯುತ್ತವೆ.ಇದನ್ನು ಕೆಲವು ಆಯುರ್ವೇದದ   ಔಷದಿಗಳಲ್ಲೂ ಬಳಸುತ್ತಾರೆ.
ನಿಮ್ಮ
ಮನು

Thursday, September 30, 2010

ಅಲೆಮಾರಿಯ ಬ್ಲಾಗು

ಹೀಗೆ ಸುಮ್ಮನೆ ಕುಳಿತಿರುವಾಗ ಏನನ್ನೋ ಅನ್ನಿಸುವ, ಕಾಡುವ, ಎಲ್ಲೆಲೋ ಅಲೆಸುವ ಕುಳಿತಲ್ಲಿ ಕುಳ್ಳಲು ಬಿಡದ ಮನಸ್ಸು ನನ್ನನು ಯಾವಾಗಲು ಗಲಿಬಿಲಿ ಗೊಳಿಸಿ ಅಲೆದಾಡಿಸುತ್ತಿರುತ್ತದೆ. ಯಾಕೋ ಈ ಮನಸು ಯಾವುದರಲ್ಲೂ ಪೂರ್ತಿಯಾಗಿ ತೊಡಗಿ ಕೊಳ್ಳದೆ ಒಂದರಿಂದ ಮತ್ತೋ೦ದು ವಿಷಯಕ್ಕೆ ಹಾರುತ್ತಿರುತ್ತದೆ. ಹೀಗೆ ಮನಸು ಹೋದಲ್ಲೆಲ್ಲ ಅಲೆದು ಅದು ನೋಡಿದ್ದೆಲ್ಲ ಕ೦ಡು ಅದರ ಜೊತೆ ಅಲೆಯುತ್ತಾ ನಾನೊಬ್ಬ ಅಲೆಮಾರಿಯಾಗಿದ್ದೇನೆ.   ಎಲ್ಲರೂ ಸ್ತಾವರವನ್ನು ಕಟ್ಟಿಕೊ೦ಡು ಬದುಕಲು ಅಸೆ ಪಡುವ ಈ ಜಗದಲ್ಲಿ ನನಗೆ ಜ0ಗಮನಾಗುವುದರಲ್ಲೇ  ಆಸಕ್ತಿ, ಯಾಕೆ ಹೀಗೆ ಏ೦ದು ನನಗೆ ಗೊತ್ತಿಲ್ಲ ಅದರೂ ಅಲೆದು ಕ೦ಡ ತಿಳಿದ ವಿಷಯಗಳನ್ನು ಹಂಚಿ ಕೊಳ್ಳಲೆಂದೇ ಈ ಬ್ಲಾಗು ಅಲೆಮಾರಿಯ ಬ್ಲಾಗು
ನಿಮ್ಮ ಮನು